_[###]

Friday, 20 May 2016

ಇನಿಹಾ ನೆಟ್‌ ನಿಂದ ಸ.ಪ್ರೌ.ಶಾಲೆ ಪದ್ಮುಂಜದ ಎಸ್‌.ಎಸ್‌.ಎಲ್‌.ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ.






ಮೇ 20, ಪದ್ಮುಂಜ: ಇಂದು ಇನಿಹಾ ನೆಟ್‌ ಕಂಪ್ಯೂಟರ್‌ ಎಜ್ಯುಕೇಶನ್‌ ವತಿಯಿಂದ 2015-16 ನೇ ಸಾಲಿನ
ಎಸ್‌.ಎಸ್‌.ಎಲ್‌.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಮೇಘ ಶ್ರೀ ಎ, ಲಾವಣ್ಯ ಕೆ.ರಾವ್‌, ಮನೋಜ್‌, ಶ್ರಾವ್ಯ, ಪುನೀತ್‌ ಮತ್ತು
ಸುಪ್ರೀತಾ ಇವರುಗಳನ್ನು ಅಭಿನಂಧಿಸಲಾಯಿತು.
2015-16 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಲ್ಲಿ
ಮೊದಲಸ್ಥಾನ ಪಡೆದ ಮೇಘಶ್ರೀ.A

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ವರದಿಗಾರರಾದ "ಕಾಸಿಂ ಪದ್ಮುಂಜ"
ದುರ್ಗಾ ಎಲೆಕ್ಟ್ರಿಕಲ್‌ ನ ಮಾಲಕರಾದ " ಕೃಷ್ಣ ಶೆಟ್ಟಿ ಕೊಲ್ಲೊಟ್ಟು" ಹಾಗೂ ಪದ್ಮುಂಜ ಕೆನಾರ ಬ್ಯಾಂಕಿನ ಸಹಾಯಕ ಸಿಬ್ಬಂದಿಯಾದ "ಬಾಲಕೃಷ್ಣ"
ರವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನಿಹಾ ನೆಟ್‌ ನ ಅಭಿನಂದನಾ ಪತ್ರವನ್ನು ನೀಡಿದರು.
2015-16 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಲ್ಲಿ
ದ್ವಿತೀಯ ಸ್ಥಾನ ಪಡೆದ ಲಾವಣ್ಯ.ಕೆ.ರಾವ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತರಾದ ಕಾಸಿಂ ಪದ್ಮುಂಜ, "ಇದೊಂದು ಅಪರೂಪದ ಕಾರ್ಯಕ್ರಮ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಇನಿಹಾ ನೆಟ್‌ ಇವತ್ತು ಈ ಅಭಿನಂದನಾ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ
ಇನಿಹಾ ನೆಟ್‌ ನ ಮಾಲಕರಾದ ಕುಮಾರೇಶ್‌ ಅವರಿಗೆ ಧನ್ಯವಾದಗಳು. ಹಾಗೆ ನಮ್ಮ ಬೆಳ್ತಂಗಡಿ ತಾಲೂಕು ಈ ಬಾರಿಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ
ರಾಜ್ಯದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇವತ್ತು ಅಭಿನಂದನೆಯನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದೇಯೂ ಉತ್ತಮವಾಗಿ ಕಲಿತು
ಒಳ್ಳೆಯ ಹೆಸರನ್ನು ಸಂಪಾದಿಸಲಿ" ಎಂದು ಹೇಳಿದರು.
2015-16 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಲ್ಲಿ
ತೃತೀಯ ಸ್ಥಾನ ಪಡೆದ ಮನೋಜ್‌

ಹಾಗೆ ಕೆನರಾ ಬ್ಯಾಂಕಿನ ಸಹಾಯಕ ಸಿಬ್ಬಂದಿ ಬಾಲಕೃಷ್ಣರವರು ಮಾತನಾಡಿ "ಇವತ್ತಿನ ಕಾರ್ಯಕ್ರಮ ಬಹಳ ಒಳ್ಳೆಯ ಕಾರ್ಯಕ್ರಮ. ನಾನು  ಸ.ಪ್ರೌ.ಶಾಲೆ ಪದ್ಮುಂಜದ ಎಸ್‌.ಎಸ್‌.ಎಲ್‌.ಸಿ ಯ ಮೊದಲ ಬ್ಯಾಚ್‌ ನವನು. ನಾನೀಗ ಸರಕಾರಿ ಉದ್ಯೋಗಿಯಾಗಿದ್ದೇನೆ. ನೀವು ಒಳ್ಳೆಯ ರೀತಿಯಲ್ಲಿ ಕಲಿತು ಒಳ್ಳೆಯ
2015-16 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಲ್ಲಿ 
ಐದನೇ ಸ್ಥಾನ ಪಡೆದ ಪುನೀತ್‌
ಕೆಲಸವನ್ನು ಪಡೆದು ನಿಮ್ಮ ತಂದೆ ತಾಯಿಗೆ ಊರಿಗೆ ಒಂದು ಒಳ್ಳೆಯ ಹೆಸರನ್ನು ತರಬೇಕು" ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
2015-16 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಲ್ಲಿ 
ಆರನೇ ಸ್ಥಾನ ಪಡೆದ ಸುಪ್ರಿತಾ

ಕಾರ್ಯಕ್ರಮದಲ್ಲಿ ಶಾರದಾ ಫ್ಯಾನ್ಸಿಯ ಗೋಪಾಲ ಕೃಷ್ಣ, ರಾಘವ ಟೈಲರ್‌, ಸುಬ್ಬಣ್ಣ ಶೆಟ್ಟಿ, ಆನಂದ್‌ ಪದ್ಮುಂಜ, ಕಣಿಯೂರು ಗ್ರಾ.ಪಂ.ಗ್ರಂಥಾಲಯದ ಮುಖ್ಯಸ್ಥೆ ಶ್ರೀಮತಿ ರೇವತಿ, ಬಿ.ಮುತ್ತಪ್ಪ ಬೊಳ್ಚೋಡಿ, ನಂದೇಶ್‌ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇನಿಹಾ ನೆಟ್‌ ನ ಮಾಲಕರಾದ
"ಕುಮಾರೇಶ್‌ ಕಣಿಯೂರು" ನಡೆಸಿಕೊಟ್ಟರು.






ಫೋಟೋ ಕೃಪೆ: ಅಕ್ಷಯ ಸ್ಟೂಡಿಯೋ ಪದ್ಮುಂಜ