_[###]

ಪದ್ಮುಂಜಕ್ಕೆ ಶುಭವಿದಾಯ ಹೇಳಿದ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ !

ನೆಟ್‍ವರ್ಕ್ ಸಮಸ್ಯೆ ಹಾಗೂ ಕೊರೋನಾದಿಂದ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಇಳಿಮುಖ, ಇನಿಹಾ ನೆಟ್ ಸಂಸ್ಥೆಯನ್ನು ಪದ್ಮುಂಜದಿಂದ ಸ್ಥಳಾಂತರವಾಗಿಸಲು ಪ್ರಮುಖ ಕಾರಣಗಳಾಗಿದೆ.

ಸುಮಾರು ನಾಲ್ಕುವರೆ ವರ್ಷಗಳಲ್ಲಿ ಇನಿಹಾ ನೆಟ್ ಸಂಸ್ಥೆ ಪದ್ಮುಂಜದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣದ ಮೂಲಕ ತಾಂತ್ರಿಕವಾಗಿ ಹಾಗೂ ಅವರ ಭೌಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಕಾರಣವಾಗಿತ್ತು. ಅಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿತ್ತು. ಶೈಕ್ಷಣಿಕ ಪ್ರವಾಸಗಳ ಮೂಲಕ ಕರ್ನಾಟಕದ ನಾನಾ ಸ್ಥಳಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಪರಿಚಯಿಸಿತ್ತು. ಅಲ್ಲದೆ ಸಾರ್ವಜನಿಕರಿಗೆ ಇಂಟರ್‍ನೆಟ್ ಹಾಗೂ ಪ್ರಿಂಟಿಗ್ ಸೇವೆಗಳನ್ನು ನೀಡುತ್ತಾ ಎಲ್ಲರ ವಿಶ್ವಾಸಾರ್ಹ ಸಂಸ್ಥೆಯಾಗಿತ್ತು.

ಇದೀಗ ಅಕ್ಟೋಬರ್ 2020 ಕ್ಕೆ ತನ್ನ ಸೇವೆಯನ್ನು ಪದ್ಮುಂಜದಲ್ಲಿ ಸ್ಥಗಿತಗೊಳಿಸಿ, ಪದ್ಮುಂಜಕ್ಕೆ ಹಾಗೂ ಊರಿನ ಜನರಿಗೆ ಪ್ರೀತಿಯ ಶುಭವಿದಾಯವನ್ನು ಹೇಳುತ್ತಿದೆ. ನವೆಂಬರ್ 2020 ರಿಂದ ಪದುಂಜದಲ್ಲಿ ಇನಿಹಾ ನೆಟ್ ಸಂಸ್ಥೆ ಇರುವುದಿಲ್ಲ.

ಇಲ್ಲಿಯವರೆಗೆ ಇನಿಹಾ ನೆಟ್ ಸಂಸ್ಥೆಯನ್ನು ಪದ್ಮುಂಜದಲ್ಲಿ ಬೆಳೆಸಿದ ಊರವರಿಗೆ ವಿದ್ಯಾರ್ಥಿ ಪೋಷಕರಿಗೆ ತುಂಬುಹೃದಯದ ಕೃತಜ್ಞತೆಗಳು.