ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಪದ್ಮುಂಜ ಆಯೋಜನೆಯ ಕಿಡ್ ಮಾಡೇಲ್ ಅವಾರ್ಡ್ 2020 ರ ವಿನ್ನರ್ ಆಗಿ ಕಿಡ್ ಮಾಡೇಲ್ ಪಟ್ಟವನ್ನು “ಸನ್ಮಿತಾ ಕುಕ್ಕಾವು” ತನ್ನದಾಗಿಸಿಕೊಂಡಿದ್ದಾಳೆ.
05-02-2020 ರಂದು ರೇಡಿಯೋ ನಿನಾದ 90.4ಎಫ್‍ಎಮ್ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಧ “ಹವಲ್ದಾರ್ ರೋಹಿತ್ ಕುಮಾರ್” ಅವರು ಕಿಡ್ ಮಾಡೆಲ್ ಅವಾರ್ಡ್ ವಿನ್ನರ್ “ಸನ್ಮಿತಾ”ಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು. ಹಾಗೆ ರನ್ನರ್ ಆಗಿರುವ “ಲೀಕ್ಷಾ”ಳಿಗೆ ಯೋಧ “ಸಿಪಾಯಿ ದೀಕ್ಷಿತ್ ಯು” ಪ್ರಶಸ್ತಿ ನೀಡಿ ಅಭಿನಂದಿಸಿದರು.
2016 ರಲ್ಲಿ ಸ್ಪೂರ್ತಿ ಕಾರ್ಕಳ ಹಾಗೂ 2018 ರಲ್ಲಿ “ಶ್ರದ್ಧಾ ವಿಟ್ಲ” ಕಿಡ್ ಮಾಡೆಲ್ ಆಗಿದ್ದರು. 2020 ರಿಂದ ಹೊಸ ಕಿಡ್ ಮಾಡೆಲ್ ಆಗಿ “ಸನ್ಮಿತಾ ಕುಕ್ಕಾವು” ಹೊರಹೊಮ್ಮಿದ್ದಾಳೆ.
ಕಾರ್ಯಕ್ರಮದಲ್ಲಿ ಎಸ್‍ಡಿಎಂ ಕಾಲೇಜು ಉಜಿರೆಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀ ಭಾಸ್ಕರ ಹೆಗ್ಗಡೆ, ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕುಮಾರೇಶ್, ರೇಡಿಯೋ ನಿನಾದ ಕಾರ್ಯಕ್ರಮ ಕೋಆಡಿನೇಟರ್ ವಿಕೆ ಕಡಬ ಯೋಧ ಹವಾಲ್ದಾರ್ ಪತ್ನಿ ಶ್ರೀಮತಿ ಸುನಿತಾ ಉಪಸ್ಥಿತರಿದ್ದರು. ಸನ್ಮಿತಾ ಪೋಷಕರಾದ ನಿಶ್ಮಿತಾ, ಅಕ್ಷತಾ ಮತ್ತು ಲಿಂಗಪ್ಪ ಪೂಜಾರಿ ಹಾಗೆ ಲೀಕ್ಷಾ ಪೋಷಕರಾದ ವಿನಯ ಸಫಲ್ಯ, ತ್ರಿವೇಣಿ, ಶ್ರೀಧರ್, ಭಾರತಿ ಮತ್ತು ಶ್ರೀನಿಧಿ ಭಾಗವಹಿಸಿದ್ದರು.