ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಪದ್ಮುಂಜ ಇದರ 3 ನೇ ವರ್ಷಾಚರಣೆಯು ಇಂದು (11-02-2019) ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ ರೈ ವಹಿಸಿಕೊಂಡಿದ್ದರು.
ವಿಶೇಷ ಅಥಿತಿಗಳಾಗಿ ಹುತಾತ್ಮ ಯೋಧ ಏಕನಾಥ ಶೆಟ್ಟಿ ಅವರ ಪತ್ನಿ “ಶ್ರೀಮತಿ ಜಯಂತಿ”, ರೇಡಿಯೋ ಸಾರಂಗ್ ನ ಕಾರ್ಯಕ್ರಮ ಮುಖ್ಯಸ್ಥರಾದ “ಆರ್ಜೆ ಅಭಿಷೇಕ್” , ಬಂದಾರು ಗ್ರಾ.ಪಂ.ಅಧ್ಯಕ್ಷರಾದ “ಉದಯ್ಕುಮಾರ್ ಬಿಕೆ”, ಗ್ರಾಮೋತ್ತಾನ ಸೇವಾ ಸೆಂಟರ್ ಕೋಅರ್ಡಿನೇಟರ್ “ದುರ್ಗಾಪ್ರಸಾದ್”, ಪುರಂದರ ಶೆಟ್ಟಿ ಭಾಗವಹಿಸಿದ್ದರು.
ಸಮಾರಂಭದಲ್ಲಿ “ಚಿತ್ತ ವಿಸ್ತಾರ” ಹಿಂದಿ ಕಾರ್ಯಕ್ರಮದ ಟೀಸರ್ ನ್ನು ಹುತಾತ್ಮ ಯೋಧ ಏಕನಾಥ ಶೆಟ್ಟಿ ಅವರ ಧರ್ಮ ಪತ್ನಿ “ಶ್ರೀಮತಿ ಜಯಂತಿ” ಯವರು ಬಿಡುಗಡೆ ಗೊಳಿಸಿದರು. ಹಾಗೆ ಅವರನ್ನು ಸಮಾರಂಭದಲ್ಲಿ ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.
ಇನಿಹಾ ನೆಟ್ ವಿದ್ಯಾರ್ಥಿನಿ “ಪ್ರಾರ್ಥನಾ” ಕಾರ್ಯಕ್ರಮವನ್ನು ನಿರೂಪಿಸಿದರೆ, ಕಂಪ್ಯೂಟರ್ ಶಿಕ್ಷಕಿ “ಲಾವಣ್ಯ” ಸ್ವಾಗತಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಕುಮಾರೇಶ್ ರವರು ಸಂಸ್ಥೆಯ ಸಾಧನೆ-ಬೆಳವಣಿಗೆಯ ವರದಿ ವಾಚಿಸಿ “ ಧನ್ಯವಾದ” ಸಮರ್ಪಿಸಿದರು.
ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೆ ಮಧ್ಯಾಹ್ನದ ನಂತರ “ಇನಿಹಾ ನೆಟ್ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬಂದವು.
ಸ್ಥಳಿಯ ಪ್ರತಿಭಾವಂತ ಗಾಯಕರಾದ “ರವಿಚಂದ್ರ ಧರ್ಮಾಡಿ ಹಾಗೂ ಜಗದೀಶ್ ಬಂದಾರು” ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಹಾಗೆ ಸಂಸ್ಥೆಯ ಸಿಬ್ಬಂದಿ-ಪೋಷಕರಿಂದ “ತಿನೊಡಾ ಬೋಡ್ಚಾ” ತುಳು ಹಾಸ್ಯ ಪ್ರಹಸನ ನಡೆಯಿತು.
ಒಟ್ಟಿನಲ್ಲಿ ಇಂದು ನಡೆದ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ 3ನಢೇ ವರ್ಷಾಚರಣೆ ಅದ್ದೂರಿಯಾಗಿ ನಡೆಯಿತು.