ಪದ್ಮುಂಜ ಸೆ7: ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜು ಇಲ್ಲಿ ಬುಧವಾರ (6/9/2017) ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು
ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದ್ಮುಂಜ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಫೈನಲ್ ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ತಂಡದ ಎದುರು ವೀರೋಚಿತ ಸೋಲಿನೊಂದಿಗೆ ದ್ವಿತೀಯ ಸ್ಥಾನ ಪಟ್ಟವನ್ನು ಪದ್ಮುಂಜ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
[Click here to Photo Gallery]
ರೋಚಕತೆಯ ಸೆಮಿ ಫೈನಲ್:
ಇದಕ್ಕೂ ಮೊದಲು ಆಥಿತೇಯ ವಾಣಿ ಕಾಲೇಜಿನೊಂದಿಗೆ ರೋಚಕ ಎರಡು ಅಂತರಗಳ ಗೆಲುವಿನೊಂದಿಗೆ ಆಥಿತೇಯರಿಗೆ ಸ್ಪೆಷಲ್ ಶಾಕ್ ನ್ನು ಪದ್ಮುಂಜದ ಹುಡುಗರು ಕೊಟ್ಟಿದ್ದಾರೆ. ಪಂದ್ಯ ಆರಂಭಕ್ಕೆ ಉತ್ತಮ ಲಯದಲ್ಲಿ ಮತ್ತು ಉತ್ಸಾಹದಲ್ಲಿದ್ದ ವಾಣಿ ಕಾಲೇಜಿನ ತಂಡವನ್ನು ಕೊನೆಯ ಹಂತದಲ್ಲಿ ಸೋಲಿಸಿ ಭಾರಿ ನಿರಾಸೆ ಆಗುವಂತೆ ಮಾಡಿದ್ದಾರೆ.
ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಿಂದ ಅಭಿನಂದನೆ:
ತಾಲೂಕು ಮಟ್ಟದ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಪದ್ಮುಂಜದ ವಿದ್ಯಾರ್ಥಿಗಳಿಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ, "ಭಾರತದ ಮಹಾನ್ ವಾಲಿಬಾಲ್ ಆಟಗಾರರಾಗಿದ್ದ ಜಿಮ್ಮಿ ಜಾರ್ಜ್" ಅವರ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಿ ಅಭಿನಂದಿಸಿದೆ. ಅಲ್ಲದೆ ಕಾಲೇಜಿನ ವತಿಯಿಂದಲೂ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿಜೇತ ತಂಡದ ವಿದ್ಯಾರ್ಥಿಗಳು
ದಿಕ್ಷೀತ್
ಪ್ರವೀಣ
ಜಯಪ್ರಕಾಶ್
ಹರೀಶ್
ವಿಜೇತ್
ಅಭಿಲಾಶ್
ಪ್ರಸಾದ್


