_[###]

ನಮ್ಮ ಯೋಧನೊಂದಿಗೆ...

(15-08-2018) ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ Padmunja ಆಯೋಜಿಸಿದ್ದ "ಸ್ವಾತಂತ್ರೋತ್ಸವದ ವಿಶೇಷ" ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ
ಭಾರತೀಯ ಭೂಸೇನೆಯ ಪಂಜಾಬ್ ವಲಯದ "ಹವಿಲ್ದಾರ್ ರೋಹಿತ್" ಆವರಿಗೆ ಗೌರವಪೂರ್ಣ ಸ್ವಾಗತವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ)" ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
ಚಿತ್ತ ವಿಸ್ತಾರ ಕಾರ್ಯಕ್ರಮವನ್ನು ನೋಡುತ್ತಿದ್ದಂತೆ ಭಾವುಕರಾದ ಯೋಧ ರೋಹಿತ್ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಹಾಗೆ ಚಿತ್ತ ವಿಸ್ತಾರ ಕಾರ್ಯಕ್ರಮದ ಸಾರಥಿಗಳಾದ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ "ಯೋಧ ರೋಹಿತ್" ಅವರ ಕೈಯಿಂದ ಅಭಿನಂದನಾ ಸ್ಮರಣಿಕೆಯನ್ನು ಪಡೆಯುವ ಅದೃಷ್ಟ ಸಿಕ್ಕಿತು.
ಹಾಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ವತಿಯಿಂದ "ಯೋಧ ರೋಹಿತ್" ಅವರಿಗೆ ಗೌರವ ಪೂರ್ವಕವಾಗಿ ಸ್ಮರಣಿಕೆಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ವರದಿಗಾರರಾಗಿರುವ ಕಾಸಿಮ್, ಹಾಗೆ ಸ್ಥಳೀಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದ
ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಇನಿಹಾ ನೆಟ್ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿ ಮೇಘಶ್ರೀ ನಿರ್ವಹಿಸಿದರು ಹಾಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ "ಕುಮಾರೇಶ್‌" ವಂದಿಸಿದರು.