_[###]

ಪದ್ಮುಂಜ ಪ್ರೌಢ ಶಾಲೆಯ ಎಸ್‌.ಎಸ್‌.ಎಲ್‌.ಸಿ ಸಾಧಕ ವಿದ್ಯಾರ್ಥಿಗಳಿಗೆ ಇನಿಹಾ ನೆಟ್‌ ಸಂಸ್ಥೆಯಿಂದ ಅಭಿನಂದನೆ | ಪ್ರಥಮ ‍ ದ್ವೀತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇನಿಹಾ ನೆಟ್‌ ಸಂಸ್ಥೆಯಿಂದ ಉಚಿತ ಡಿಸಿಎ ಕೋರ್ಸ್‌ !

2017-18 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸ.ಪ್ರೌ.ಶಾಲೆ ಪದ್ಮುಂಜದ ವಿದ್ಯಾರ್ಥಿಗಳಿಗೆ ಇಂದು ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್‌ ಸಂಸ್ಥೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಎಸ್‌.ಎಸ್‌.ಎಲ್‌.ಸಿ ಸಾಧಕ ವಿದ್ಯಾರ್ಥಿಗಳಾದ ಸೌಂದರ್ಯ (ಪ್ರಥಮ), ಸ್ವಾತಿ ರೈ (ದ್ವಿತೀಯ), ವಿಭ (ತೃತೀಯ) ಹಾಗೆ  ನೌಶದ್‌, ಮಾಸಿತಾ, ಧನ್ಯಶ್ರೀ ಮತ್ತು ಸಿಂಚನಾ ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್‌ ಸಂಸ್ಥೆಯಿಂದ ಅಭಿನಂದನೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ "ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಭಾವಚಿತ್ರವನ್ನು ವಿಶೇಷ ಕಿರುಕಾಣಿಕೆಯಾಗಿ ನೀಡಲಾಯಿತು.
.
ಕಾರ್ಯಕ್ರಮದಲ್ಲಿ ಸ್ಥಳಿಯ ಪತ್ರಿಕೆಯ ವರದಿಗಾರರಾಗಿರುವ ಕಾಸಿಂ ಪದ್ಮುಂಜ, ಪದ್ಮುಂಜ ಸಿ.ಎ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾದ ರಾಜೀವ ರೈ ಹಾಗೆ ಸಾಧಕ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಸಹಾಯಕ ಕಂಪ್ಯೂಟರ್‌  ಶಿಕ್ಷಕಿ ಧನ್ಯ ಕಾರ್ಯಕ್ರಮವನ್ನು ನಿರ್ವಹಿಸಿದ್ರೆ, ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕರಾದ ಕುಮಾರೇಶ್‌ ಸ್ವಾಗತಿದರು. ವಿದ್ಯಾರ್ಥಿನಿ "ಲಾವಣ್ಯ" ಧನ್ಯವಾದ ಸಮರ್ಪಿಸಿದಳು. ಪ್ರತೀ ವರ್ಷ ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್‌ ಸಂಸ್ಥೆಯು ಎಸ್‌.ಎಸ್‌.ಎಲ್‌.ಸಿ ಸಾಧಕ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಡಿಸಿಎ ಕೋರ್ಸ್‌ ನ್ನು ಈ ಬಾರಿಯ ಎಸ್‌.ಎಸ್‌.ಎಲ್‌.ಸಿ ಪ್ರಥಮ ಸ್ಥಾನಿ ಸೌಂದರ್ಯ ಹಾಗೂ ದ್ವಿತೀಯ ಸ್ಥಾನಿ ಸ್ವಾತಿ ರೈ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದ ಕೊನೆಗೆ ಎಲ್ಲರಿಗೂ ಸಂಸ್ಥೆಯ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

PHOTO GALLERY: