10 Jan 2017: ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯರಾಗಿದ್ದ ಶ್ರೀಮತಿ ರೇವತಿ ಅವರಿಗೆ ಇಂದು
ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. (Farewell show of Smt Revathi teacher) ಶಾಲೆಯ ಎಲ್ಲಾ ಮಕ್ಕಳಿಗೂ ಶಿಕ್ಷಕ ವೃಂದದವರಿಗೂ ಹಾಗೆ ಊರಿನವರಿಗೂ ಬಹಳ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇದೀಗ ವೃತ್ತಿಯಿಂದ ನಿವೃತ್ತಿಯನ್ನು ಪಡೆದ ಶ್ರೀಮತಿ ರೇವತಿ ಯವರಿಗೆ ಪ್ರೀತಿಯ ಶುಭ ವಿದಾಯವನ್ನು ಹೇಳಲಾಯಿತು.
ಕಾರ್ಯಕ್ರಮದಲ್ಲಿ ಕಣಿಯೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಸುನೀಲ್ ಸಾಲಿಯಾನ್, ಎಸ್ ಡಿ ಎಂ ಸಿ ಅಧ್ಯಕ್ಷೆ ಸುಮತಿ, ರವಿರಾಜ್ ಹೆಗ್ಡೆ, ನವೀನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಮಂಜುನಾಥ್ ನಿರ್ವಹಿಸಿದರು.
